Ticker

6/recent/ticker-posts

Ad Code

Responsive Advertisement

Karnataka PU Result: ಪಿಯು ರಿಸಲ್ಟ್​ ತಿರಸ್ಕರಿಸಿದ 878 ವಿದ್ಯಾರ್ಥಿಗಳು; ಆಗಸ್ಟ್ 19ಕ್ಕೆ ಪರೀಕ್ಷೆ

 

Karnataka PU Result: ಪಿಯು ರಿಸಲ್ಟ್​ ತಿರಸ್ಕರಿಸಿದ 878 ವಿದ್ಯಾರ್ಥಿಗಳು; ಆಗಸ್ಟ್ 19ಕ್ಕೆ ಪರೀಕ್ಷೆ


ನಮಗೆ SSLC, 1st PUC ಅಂಕ ಕಡಿಮೆ ಇದೆ. ಹೀಗಾಗಿ ಪರೀಕ್ಷೆ ಬರೆದೇ ಇನ್ನೂ ಹೆಚ್ಚಿನ ಅಂಕ ಪಡೆಯುವ ಕಾರಣದಿಂದ ಫಲಿತಾಂಶ ತಿರಸ್ಕರಿಸಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.



ಸಾಂದರ್ಭಿಕ ಚಿತ್ರ









ಬೆಂಗಳೂರು(ಆ.2): ಕೊರೋನಾ ಮಹಾಮಾರಿ ಹಿನ್ನೆಲೆ, ಶಿಕ್ಷಣ ಇಲಾಖೆ
 ಈ ವರ್ಷ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಪಾಸ್ ಮಾಡಿತ್ತು
. ಫಲಿತಾಂಶಕ್ಕೆ ಎಸ್​ಎಸ್​ಎಲ್​ಸಿ ಮತ್ತು ಪ್ರಥಮ 

ಪಿಯುಸಿ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಅದರಂತೆ ಜು.20ರಂದು
 ದ್ವಿತೀಯ ಪಿಯು ಫಲಿತಾಂಶವನ್ನು ಪ್ರಕಟ ಮಾಡಲಾಗಿತ್ತು. ರಿಸಲ್ಟ್​ ನೀಡುವ ಮುನ್ನವೇ 
ಪಿಯು ಬೋರ್ಡ್​ ವಿದ್ಯಾರ್ಥಿಗಳಿಗೆ ಸೂಚನೆಯೊಂದನ್ನು ನೀಡಿತ್ತು. 
ಈ ಫಲಿತಾಂಶವನ್ನು ತಿರಸ್ಕರಿಸುವ ವಿದ್ಯಾರ್ಥಿಗಳಿಗೆ ಆಗಸ್ಟ್​ ತಿಂಗಳಲ್ಲಿ ಮತ್ತೆ ಪರೀಕ್ಷೆ
 ನಡೆಸಲಾಗುತ್ತದೆ. ಒಂದು ವೇಳೆ ಅಲ್ಲಿ ಅಂಕಗಳು ಕಡಿಮೆ ಬಂದರೆ, ಮತ್ತೆ ಅವರಿಗೆ 
ಹಳೆ ಫಲಿತಾಂಶ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.
ಈಗ ಬರೋಬ್ಬರಿ 878 ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ನೀಡಿದ ಫಲಿತಾಂಶವನ್ನು ತಿರಸ್ಕರಿಸಿದ್ದಾರೆ.
 ಹೀಗಾಗಿ ಇವರಿಗೆ ಇದೇ ಆಗಸ್ಟ್ 19ರಂದು ಪಿಯುಸಿ ಪರೀಕ್ಷೆಯನ್ನು 
ನಡೆಸಲು ಪಿಯು ಬೋರ್ಡ್​ ನಿರ್ಧಾರ ಮಾಡಿದೆ. ಈ ವಿದ್ಯಾರ್ಥಿಗಳು ಪರೀಕ್ಷೆ 
ಬರೆದ ಬಳಿಕ ಆ ಫಲಿತಾಂಶವೂ ಸಮಾಧಾನ ತಂದಿಲ್ಲ ಎಂದರೆ, ಮತ್ತೆ ಹಳೇ ಫಲಿತಾಂಶ ಸಿಗುವುದಿಲ್ಲ.



ಶಿಕ್ಷಣ ಇಲಾಖೆ ಸುಮಾರು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪಾಸ್ ಮಾಡಿತ್ತು. 
ಇದೀಗ 878 ವಿದ್ಯಾರ್ಥಿಗಳು ಫಲಿತಾಂಶ ಸಮಾಧಾನ ತಂದಿಲ್ಲ ಎಂದು ತಿರಸ್ಕರಿಸಿದ್ದಾರೆ. 
ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯೊಂದರಲ್ಲೇ 221 ವಿದ್ಯಾರ್ಥಿಗಳು ಪಿಯು ಫಲಿತಾಂಶವವನ್ನು 
ತಿರಸ್ಕಾರ ಮಾಡಿದ್ದಾರೆ.

ಜಿಲ್ಲೆಯ 221 ಫ್ರೆಶರ್​ ಹಾಗೂ 16 ರಿಪೀಟರ್ಸ್ ವಿದ್ಯಾರ್ಥಿಗಳು ಪಿಯು ಫಲಿತಾಂಶವನ್ನು 
ತಿರಸ್ಕರಿಸಿದ್ದಾರೆ.  ಇದರಲ್ಲಿ ಕೊಟ್ಟೂರು ಇಂದು ಪಿಯು ಕಾಲೇಜಿನ 104 ವಿದ್ಯಾರ್ಥಿಗಳು 
ಫಲಿತಾಂಶ ಸಮಾಧಾನ ತಂದಿಲ್ಲ ಎಂದು ತಿರಸ್ಕಾರ ಮಾಡಿದ್ದಾರೆ. ಪ್ರತಿ ವರುಷ 
ಈ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ರ್ಯಾಂಕ್ ಬರುತ್ತಿತ್ತು ಎಂದು ತಿಳಿದು ಬಂದಿದೆ.

ಫಲಿತಾಂಶ ತಿರಸ್ಕಾರ ಯಾಕೆ?

ಪಿಯು ಬೋರ್ಡ್ ನೀಡಿದ ಅಂಕಗಳಿಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
  ನಮಗೆ SSLC, 1st PUC ಅಂಕ ಕಡಿಮೆ ಇದೆ. ಹೀಗಾಗಿ ಪರೀಕ್ಷೆ ಬರೆದೇ ಇನ್ನೂ 
ಹೆಚ್ಚಿನ ಅಂಕ ಪಡೆಯುವ ಕಾರಣದಿಂದ ಫಲಿತಾಂಶ ತಿರಸ್ಕರಿಸಿದ್ದೇವೆ ಎಂದು ವಿದ್ಯಾರ್ಥಿಗಳು
 ಹೇಳಿದ್ದಾರೆ.ಇದನ್ನೂ 
ಕೊರೋನಾ ಹಿನ್ನೆಲೆ ಈ ವರ್ಷ ಪರೀಕ್ಷೆ ನಡೆದಿಲ್ಲ. ಮೂರು ವರುಷದ ಅಂಕ ಪರಿಗಣಿಸಿ 
ಫಲಿತಾಂಶ ನೀಡಲಾಗಿತ್ತು.  ಫಲಿತಾಂಶಕ್ಕೆ ಎಸ್​ಎಸ್​ಎಲ್​ಸಿ, ಪ್ರಥಮ ಪಿಯುಸಿ ಹಾಗೂ
 2nd PUC ಪ್ರಾಕ್ಟಿಕಲ್ ಅಂಕಗಳನ್ನು ಪರಿಗಣಿಸಲಾಗಿತ್ತು.
ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ
 ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. 
ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, 
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. 
ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ 
ಪ್ರತಿಯೊಬ್ಬರೂ ಕೈ ಜೋಡಿಸಬೇಕು.

Post a Comment

0 Comments